ಕಿಷ್ಕಿಂಧೆ

 ಕಪಿವೀರರಾದ ವಾಲಿ, ಸುಗ್ರೀವರ ರಾಜಧಾನಿಯಾಗಿದ್ದು ರಾಮಾಯಣ ಕಾಲದಲ್ಲಿ ಪ್ರಸಿದ್ಧವಾಗಿದ್ದ ಒಂದು ಪಟ್ಟಣ. ಈಗ ಪಾಳುಬಿದ್ದ ಹಳ್ಳಿಯಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ತುಂಗಭದ್ರಾ ನದೀ ತೀರದಲ್ಲಿರುವ ಈ ಹಳ್ಳಿಗೆ ಸಮೀಪವಾಗಿ ಪ್ರಸಿದ್ಧ ಹಂಪೆ ಇದೆ. ಇಲ್ಲಿನ ದೊಡ್ಡ ಬೆಟ್ಟವೊಂದರ ಗುಹೆಯಲ್ಲಿ ವಾಲಿ ಕೆಲಕಾಲ ವಾಸವಾಗಿದ್ದನಂತೆ.ರಾಮನು ಸೀತೆಯನ್ನು ಹುಡುಕುತ್ತಾ ಸಾಗುವಾಗ ಸುಗ್ರೀವನ ಪರಿಚಯವಾಗುತ್ತದೆ. ಸುಗ್ರೀವನ ಸಹೋದರ ವಾಲಿ ದುಷ್ಟನಾಗಿದ್ದು ಅಧಿಕಾರವನ್ನು ಕಿತ್ತುಕೊಂಡು,ಸುಗ್ರೀವನ ಹೆಂಡತಿಯನ್ನು ಬಂಧನದಲ್ಲಿ ಇರಿಸಿದ ವಿಷಯ ರಾಮನಿಗೆ ತಿಳಿಯುತ್ತದೆ. ಆಗ ರಾಮ ಸುಗ್ರೀವನ ನೆರವಿಗೆ ಧಾವಿಸುತ್ತಾನೆ. 

  *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ